ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಸ್ಥಳೀಯ ಸುದ್ದಿಗಳು

ಕಾರ್ಕಳ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಗೋಪಾಲಕೃಷ್ಣ ರಾವ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Share News

ಕಾರ್ಕಳ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಗೋಪಾಲಕೃಷ್ಣ ರಾವ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

 

ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ರಾವ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ಸಂತಾಪ ಸೂಚಿಸಿದ್ದಾರೆ. 

 

ಹಿರಿಯರಾದ ಗೋಪಾಲಕೃಷ್ಣ ರಾವ್ ಅವರು ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅವರು ನೀಡಿದ ಸೇವೆ ಸ್ಮರಣೀಯವಾಗಿದೆ, ಅವರ ಮಾರ್ಗದರ್ಶನದಲ್ಲಿ ನಡೆದ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವವು ಅವಿಸ್ಮರಣೀಯವಾಗಿದೆ. ಪರಮ ದೈವ ಭಕ್ತರಾಗಿದ್ದು ಧರ್ಮ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರ ಅಗಲುವಿಕೆಯಿಂದ ಸಮಾಜವು ಒಬ್ಬ ಹಿರಿಯ ಧಾರ್ಮಿಕ ಮುಂದಾಳುವನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯು ಭಗವಂತನು ಕರುಣಿಸಲಿ ಎಂದು ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!