ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡುವಂತೆ ವಿನಂತಿಸಿ ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವ ಬಗ್ಗೆ

Share News

19-07-2026🏳️‍🌈🏳️‍🌈🏳️‍🌈🏳️‍🌈🦚🦚🦚🏳️‍🌈🏳️‍🌈🏳️‍🌈

*ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡುವಂತೆ ವಿನಂತಿಸಿ ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವ ಬಗ್ಗೆ*

 

*ಧರ್ಮಬಂಧುಗಳೇ* *ಜೈ ಜಿನೇಂದ್ರ*

ಅತಿಶಯ ಕ್ಷೇತ್ರ ಸೂಡಿ ಶಿರ್ಲಾಲಿನ ವಿಹಾರದಲ್ಲಿರುವ ಪ.ಪೂ.೧೦೮ ಆಚಾರ್ಯ ಪುಷ್ಪದಂತ ಸಾಗರ ಮಹಾರಾಜರ ಪರಮ ಶಿಷ್ಯರಾದ

*ಏಲಾಚಾರ್ಯ ೧೦೮ ಪ್ರಸಂಗ ಸಾಗರ ಮಹಾರಾಜ* ರನ್ನು ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವರ್ಷಾಯೋಗವನ್ನು ಕೈಗೊಳ್ಳುವಂತೆ ವಿನಂತಿಸಿ, ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವುದೆಂದು ನಿರ್ಣಯಿಸಲಾಗಿದೆ.

*ದಿ: 19-07-2026 ಆದಿತ್ಯವಾರ ಬೆಳಿಗ್ಗೆ 10:30 ಕ್ಕೆ*

*ಸ್ಥಳ:ಅತಿಶಯ ಕ್ಷೇತ್ರ ಶಿರ್ಲಾಲು ಸೂಡಿ ಬಸದಿ*

 

ಪಾವನ ಸಾನಿಧ್ಯ ಮತ್ತು ನೇತೃತ್ವ

*ಪ.ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ*.

ಮಾರ್ಗದರ್ಶನ

*ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು*

*ಧರ್ಮಾಧಿಕಾರಿಗಳು*, *ಶ್ರೀ ಕ್ಷೇತ್ರ ಧರ್ಮಸ್ಥಳ* ಮತ್ತು

*ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಕಳ* ಇವರ ಮುಂದಾಳತ್ವದಲ್ಲಿ ಹಾಗೂ ಎಲ್ಲಾ ಜೈನ ಸಂಘ ಸಂಸ್ಥೆಗಳ ಸಹಯೋಗದಲ್ಲಿ.

ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಬಂಧುಗಳಾದ ಹಾಗೂ ಮುನಿಭಕ್ತರಾದ ತಾವೆಲ್ಲರೂ ಈ ಧರ್ಮಪ್ರಭಾವನಾ ಕಾರ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾಗ ಬೇಕಾಗಿ ವಿನಂತಿ.

*ವಿ.ಸೂ – ಶ್ರಾವಕ ಶ್ರಾವಕಿಯರು ಬೆಳಿಗ್ಗೆ 9:30 ಕ್ಕೆ ಶ್ರೀ ಮಠದಲ್ಲಿ ಉಪಸ್ಥಿತರಿರಬೇಕಾಗಿ ವಿನಂತಿ.ಅಲ್ಲಿಂದ ಎಲ್ಲರೂ ಒಟ್ಟಾಗಿ ಶಿರ್ಲಾಲು ಸೂಡಿ ಬಸದಿಗೆ ಹೊರಡುವುದು*

 

ಶ್ರೀ ಕ್ಷೇತ್ರ ಜೈನ ಮಠ

 

ದಾನಶಾಲೆ , ಕಾರ್ಕಳ .


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!