ಸ್ಥಳೀಯ ಸುದ್ದಿಗಳು
ಜಿಮ್ಸನಲ್ಲಿ ಸುಲಭ ಶೌಚಾಲಯ ಸಂಕೀರ್ಣ ಉದ್ಘಾಟನೆ.
ಜಿಮ್ಸನಲ್ಲಿ ಸುಲಭ ಶೌಚಾಲಯ ಸಂಕೀರ್ಣ ಉದ್ಘಾಟನೆ

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಭಾರತೀಯ ರೈಲ್ವೇ ಇಲಾಖೆಯ ಸಿ.ಎಸ್.ಆರ್ ಅನುದಾನದಿಂದ ರೂ 30 ಲಕ್ಷ ವೆಚ್ಚದಲ್ಲಿ ಕರ್ನಾಟಕ ಶಾಖೆಯ ಅಂತರಾಷ್ಟ್ರೀಯ ಸುಲಭ ಸಮಾಜ ಸೇವಾ ಸಂಸ್ಥೆ ಬೆಂಗಳೂರು ಅವರಿಂದ ನಿರ್ಮಿಸಿದ ಸುಲಭ ಶೌಚಾಲಯ ಸಂಕೀರ್ಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ್ ಅವರು ಉದ್ಘಾಟನೆಗೊಳಿಸಿದರು.

ಈ ಸಂದರ್ಭದಲ್ಲಿ ಜಿಮ್ಸ ನಿರ್ದೇಶಕ ಬಸವರಾಜ ಬೋಮ್ಮನಹಳ್ಳಿ,ವೈದ್ಯಕೀಯ ಅಧೀಕ್ಷರಾದ ಡಾ.ರೇಖಾ ಸೋನಾವನೆ,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸನಗೌಡ ಕರಿಗೌಡರ, ಅಂತರಾಷ್ಟ್ರೀಯ ಸುಲಭ ಸಮಾಜ ಸೇವಾ ಸಂಸ್ಥೆ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಮಳಗೆ ವಿಶ್ವನಾಥ,ಸ್ವಚ್ಛತಾ ವ್ಯವಸ್ಥಾಪಕ ಮಲ್ಲಪ್ಪ. ಬಿ. ಜಿಮ್ಸ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.


