ಟ್ರೆಂಡಿಂಗ್ ಸುದ್ದಿಗಳು
ವಿಪರೀತ ಮಳೆಯ ಪರಿಣಾಮ – ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ನಾಳೆಯೂ ರಜೆ
ಬ್ರೇಕಿಂಗ್ ನ್ಯೂಸ್ | ಕಾರ್ಕಳ
ವಿಪರೀತ ಮಳೆಯ ಪರಿಣಾಮ – ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ನಾಳೆಯೂ ರಜೆ
ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ, ಮಾನ್ಯ ತಹಶೀಲ್ದಾರ್‌ರವರು ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ನಾಳೆಯೂ ರಜೆ ಘೋಷಿಸಿದ್ದಾರೆ.
ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಸ್ಥಿತಿಗತಿಯನ್ನು ನಮ್ಮ ಟಿವಿ ಚಾನೆಲ್ ಮೂಲಕ ನಿರಂತರವಾಗಿ ವರದಿ ಮಾಡಲಾಗಿತ್ತು. ಅದರ ಬಳಿಕ ಪರಿಸ್ಥಿತಿಯನ್ನು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸತತ ಎರಡನೇ ದಿನ ಶಾಲೆಗಳಿಗೆ ರಜೆ ಘೋಷಿಸಿರುವುದು ಗಮನಾರ್ಹವಾಗಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಆಡಳಿತದ ಸೂಚನೆಗಳನ್ನು ಪಾಲಿಸಿ, ಅನಗತ್ಯವಾಗಿ ಮನೆಯಿಂದ ಹೊರಗೆ ತೆರಳದೇ ಸುರಕ್ಷಿತವಾಗಿರಲು ಮನವಿ ಮಾಡಲಾಗಿದೆ.
ಮಕ್ಕಳೇ, ನಿಮಗೆ ನಾಳೆಯೂ ರಜೆ ಇದೆ. ಸುರಕ್ಷಿತವಾಗಿರಿ. 🙏

