ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈನ ಸಮಾಜದ ಧರ್ಮಗುರುಗಳಿಂದ ಗೌರವಿಸಿ ಆಶೀರ್ವಾದ

*ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈನ ಸಮಾಜದ ಧರ್ಮಗುರುಗಳಿಂದ ಗೌರವಿಸಿ ಆಶೀರ್ವಾದ*
ಬೆಂಗಳೂರು, ಆ.31: ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಸಮಸ್ತ ಜೈನ ಸಮಾಜದ ಪರವಾಗಿ ಜೈನ ಧರ್ಮಗುರುಗಳು ಗೌರವಿಸಿ, ಹರಸಿ ಆಶೀರ್ವದಿಸಿದರು.
ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ, ವರೂರು-ಹುಬ್ಬಳ್ಳಿಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಕಂಬದಹಳ್ಳಿಯ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸ್ಮರಣಿಕೆಯಾಗಿ ರವಿ ಶ್ರೇಣ ಆಚಾರ್ಯ ರಚಿತ, ಶ್ರೀ ಜೀವಂಧರ ಕುಮಾರ್ ಹೋತಪೇಟೆ ಅವರು ಅನುವಾದಿಸಿರುವ ‘ಅಧ್ಯಾತ್ಮಯೋಗಿ ಶ್ರೀ ರಾಮ’ ಗ್ರಂಥವನ್ನು ಶಾಸ್ತ್ರ ಸ್ವಾಧ್ಯಾಯಕ್ಕಾಗಿ ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಮುಖ್ಯಮಂತ್ರಿಗಳ ಆಡಳಿತ ಅವಧಿಯಲ್ಲಿ ನಾಡಿನ ಸರ್ವರಿಗೂ ಒಳಿತಾಗಲಿ, ಕರ್ನಾಟಕ ರಾಮರಾಜ್ಯದಂತಾಗಲಿ ಎಂದು ಜೈನ ಸಮಾಜದ ಧರ್ಮಗುರುಗಳು ಪ್ರಾರ್ಥಿಸಿದರು. ಇದೇ ವೇಳೆ ಜೈನ ಸಮಾಜಕ್ಕೆ ಸಂಬಂಧಿಸಿದ ಜೈನ ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಜೈನ ಸಮಾಜದ ಬೇಡಿಕೆಗಳ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟವರೊಂದಿಗೆ ವಿಚಾರಿಸಿ ಸೂಕ್ತವಾಗಿ ತಿಳಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಮಗಡುಮ್, ವಿನೋದ್ ದೊಡ್ಡಣ್ಣನವರ್, ರಾಜಕೀರ್ತಿ, ಅರುಣ್ ಯಲಗುದ್ರಿ, ಮುನ್ನೋಳಿ ವಕೀಲರು, ಆಶಾ ಪ್ರಭು, ಹರ್ಷೇಂದ್ರ ಜೈನ್ ಸೇರಿದಂತೆ ಕರ್ನಾಟಕ ಜೈನ ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಆಶೀಶ್ ಮತ್ತು ನೇಹಾ ಜೈನ್ ಉಪಸ್ಥಿತರಿದ್ದರು.




