ಟ್ರೆಂಡಿಂಗ್ ಸುದ್ದಿಗಳು

ಮೇ 28 ರಂದು ನಾರಾವಿಯಲ್ಲಿ ಶ್ರೀ ಸೂರ್ಯ ನಾರಾಯಣ ದೇವರ ದ್ರುಢ ಕಲಶಾಭಿಷೇಕ

Share News

ಈ ಪವಿತ್ರ ಧಾರ್ಮಿಕ ಕಾರ್ಯಕ್ರಮವು ಗುರುವಾರ, ದಿನಾಂಕ 28-05-2026 ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದ ಅಂಗವಾಗಿ ವೈದಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ, ಅಲಂಕಾರ, ಮಂತ್ರೋಚ್ಚಾರಣೆ, ಮಂಗಳಾರತಿ ಹಾಗೂ ದ್ರುಢ ಕಲಶಾಭಿಷೇಕ ಸೇವೆಗಳು ಶ್ರದ್ಧಾಭಕ್ತಿಯಿಂದ ನೆರವೇರಲಿವೆ.
ಈ ದ್ರುಢ ಕಲಶಾಭಿಷೇಕದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಆರೋಗ್ಯ, ಆಯುರಾರೋಗ್ಯ, ಐಶ್ವರ್ಯ, ಸಂತಾನ ಸೌಭಾಗ್ಯ ಹಾಗೂ ಸಕಲ ಸಂಕಷ್ಟಗಳಿಂದ ನಿವೃತ್ತಿ ಲಭಿಸುವುದೆಂಬ ಗಾಢ ನಂಬಿಕೆ ಇದೆ. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ..
ಈ ಶುಭ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಸೂರ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸೂರ್ಯನಾರಾಯಣ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಸೇವಾರ್ಥಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!