ಸ್ಥಳೀಯ ಸುದ್ದಿಗಳು
ನಾರಾವಿಯ ಜೈನ ಸಮಾಜದ ಧ್ರುವ ತಾರೆ ಶ್ರೀ ಪ್ರೇಮ್ ಕುಮಾರ್ ಇಂದು ಅಸ್ತಂಗತ

ನಾರಾವಿಯ ಜೈನ ಸಮಾಜದ ಧ್ರುವ ತಾರೆ ಇಂದು ಅಸ್ತಂಗತ. ನಾರಾವಿ ಮಾಗಣೆ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ದಾನಿಗಳಾದ ಶ್ರೀ ಪ್ರೇಮ್ ಕುಮಾರ್, ಧರ್ಮ ಶ್ರೀ, ಹೊಸ್ಮಾರು ಇವರು ಈದಿನ ಬೆಳಿಗ್ಗೆ 7 ಗಂಟೆ ಗೆ ಅನಾರೋಗ್ಯದಿಂದಾಗಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಶಾದಿಸುತ್ತೇವೆ.ಮ್ರತರ ಪಾರ್ಥೀವ ಶರೀರವನ್ನು ಹೊಸ್ಮಾರಿಗೆ (11.30)ತಂದು ಅಲ್ಲಿಂದ ನೂರಾಳ್ಬೆಟ್ಟು ಪ್ರೇಮ ನಿಲಯದಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದೆಂದು ಮಾಹಿತಿ ದೊರಕಿರುತ್ತದೆ.

