ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಕಾರ್ಕಳ ತಾಲೂಕು ಕಾರ್ಕಳ ವಲಯ ಬಂಗ್ಲೆಗುಡ್ಡೆ ಒಕ್ಕೂಟ ದಲ್ಲಿ ಹನಿ ಜ್ಞಾನವಿಕಾಸ ದ ಆಯೋಜನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಕಾರ್ಕಳ ತಾಲೂಕು
ಕಾರ್ಕಳ ವಲಯ ಬಂಗ್ಲೆಗುಡ್ಡೆ ಒಕ್ಕೂಟ ದಲ್ಲಿ ಹನಿ ಜ್ಞಾನವಿಕಾಸ ದ ಆಯೋಜನೆಯಲ್ಲಿ ದಿನಾಂಕ 21.06.2026 ರಂದು ಬಂಗ್ಲೆಗುಡ್ಡೆ ಸದ್ಭವನಗರ ಶಾಲಾ ಆವರಣ ದಲ್ಲಿ ಪರಿಸರ ಜಾಗೃತಿ ಬೀದಿ ನಾಟಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಉಮೇಶ್ ನಾಯ್ಕ ಹೆಡ್ ಕಾನ್ ಸ್ಟೇಬಲ್ ಬಂಗ್ಲೆಗುಡ್ಡೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇಂದು ಪರಿಸರ ಜಾಗೃತಿ ನೀರಿನ ಮಿತ ಬಳಕೆ, ಹಾಗೂ ಮೊಬೈಲ್ ದುಷ್ಪರಿಣಾಮ ದ ಬಗ್ಗೆ ಪ್ರತೀ ಮನೆಯಲ್ಲಿ ಅರಿವು ಮೂಡಬೇಕು ಪ್ರತೀ ಮನೆಯ ಜವಾಬ್ದಾರಿ ಈ ಕೆಲಸವನ್ನು ಇಂದು ಸಾರ್ವಜನಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಲ್ಲಿ ಆರಂಭ ದಿಂದಲೂ ಒಕ್ಕೂಟಗಳಲ್ಲಿ ಪರಿಸರ ಜಾಗೃತಿ ಯ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದೇವೆ.ಮೊದಲೆಲ್ಲ ಟಿವಿ ಯಲ್ಲಿ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನೋಡಿದ್ದೇವೆ ಆದ್ರೆ ನಾವು ಪರಿಸರ ಜಾಗ್ರತಿ ಬಗ್ಗೆ ಇನ್ನು ಜಾಗ್ರತಾರಾಗದೆ ಹೋದರೆ ನೀರಿನ ಸಮಸ್ಯೆ ಯನ್ನು ಎದುರಿಸಬೇಕಾದ ಅನಿವಾರ್ಯತೆ ಬರಬಹುದು ಅದಕ್ಕಾಗಿ ಜಾಗ್ರತಾರಾಗೋಣ ಎಂದರು.
ಕಾರ್ಯಕ್ರಮ ದಲ್ಲಿ ಕುಂದಾಪುರ ಪಂಚಾಗಂಗಾವಳಿ ಉಪ್ಪಿನಕುದ್ರು ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರು ಅರ್ಥಗರ್ಭಿತ ವಾದ ಮೊಬೈಲ್ ದುಪರಿಣಾಮ, ನೀರಿನ ಮಿತ ಬಳಕೆ, ಮೂಢನಂಬಿಕೆ, ಶಿಕ್ಷಣ, ಪ್ಲಾಸ್ಟಿಕ್ ನಿಷೇದ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಬೀದಿ ನಾಟಕ ನಡೆಸಿಕೊಟ್ಟರು.
ಈ ಕಾರ್ಯಕ್ರಮ ದಲ್ಲಿ ತಾಲೂಕು ಜನ ಜಾಗೃತಿ ಸದಸ್ಯರು ಅಶೋಕ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷರು ಶರ್ಮಿಳಾ ಶೆಟ್ಟಿ, ಪುರಸಭಾ ಸದಸ್ಯರು ನೀತಾ ಆಚಾರ್ಯ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ವಲಯ ಮೇಲ್ವಿಚಾರಕರು ಗೀತಾ, ಸೇವಾಪ್ರತಿನಿಧಿ ಸುನಿತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಗ್ಲೆಗುಡ್ಡೆ ಒಕ್ಕೂಟ ಹನಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಗ್ರಾಮಸ್ತರು ಭಾಗವಹಿಸಿದ್ದು ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದರು.

