ಸ್ಥಳೀಯ ಸುದ್ದಿಗಳು
ಕಾಪು : ಹಲಸು ಮತ್ತು ಮಾವಿನ ಮೇಳದ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ

ಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಾಗೂ ಶಕ್ತಿ ಇವೆಂಟ್ಸ್ ವತಿಯಿಂದ ಆಯೋಜಿಸಲಾಗುತ್ತಿರುವ ಹಲಸು ಮತ್ತು ಮಾವಿನ ಮೇಳ ಪ್ರಯುಕ್ತ ಕಾಪು ವಿಧಾನಸಭಾ ಕ್ಷೇತ್ರದಾದ್ಯಂತ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಜೂನ್ 12, 13 ಹಾಗೂ 14 ರಂದು ಹಳೆ ಮಾರಿಗುಡಿ ಸಭಾಂಗಣದಲ್ಲಿ ನಡೆಯಲಿರುವ ಈ ಮೇಳದಲ್ಲಿ ಸ್ಥಳೀಯ ರೈತರು, ಮಹಿಳಾ ಸ್ವಸಹಾಯ ಸಂಘಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗುತ್ತಿದೆ.
ಹಲಸಿನ ಹಾಗೂ ಮಾವಿನ ವೈವಿಧ್ಯಮಯ ಉತ್ಪನ್ನಗಳು , ರುಚಿಕರ ಆಹಾರ ಮಳಿಗೆಗಳು , ವಿವಿಧ ವಾಣಿಜ್ಯ ಮತ್ತು ಪ್ರದರ್ಶನ ಮಳಿಗೆಗಳು
ಸಾಂಸ್ಕೃತಿಕ ಕಾರ್ಯಕ್ರಮಗಳು :
ಇವುಗಳೊಂದಿಗೆ ನಡೆಯಲಿರುವ ಈ ಸ್ವಾದ ಮತ್ತು ಸಂಭ್ರಮದ ಉತ್ಸವವನ್ನು ಯಶಸ್ವಿಗೊಳಿಸಲು ಕ್ಷೇತ್ರದಾದ್ಯಂತ ಆಮಂತ್ರಣ ಪತ್ರಿಕೆಗಳನ್ನು ವಿತರಿಸಿ ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತಿದೆ.
ಸ್ಥಳ: ಹಳೆ ಮಾರಿಗುಡಿ ಸಭಾಂಗಣ, ಕಾಪು
ದಿನಾಂಕ: ಜೂನ್ 12, 13, 14

