ರಾಜ್ಯ ಸುದ್ದಿ

ರಾಜ್ಯಾದ್ಯಂತ ಮಳೆ ಅಬ್ಬರಕ್ಕೆ ಮುನ್ಸೂಚನೆ: ಕರಾವಳಿಗೆ ಹಸಿರು ಅಲರ್ಟ್, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್..!

Share News

ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

 

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ನಗರದಲ್ಲಿ ಗರಿಷ್ಠ ತಾಪಮಾನ 32°C ಹಾಗೂ ಕನಿಷ್ಠ 22°C ಆಸುಪಾಸಿನಲ್ಲಿ ಇರಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರಿ ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಸಿರು ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮೇ 25ರಂದು ಕೆಲವೆಡೆ ಆಲಿಕಲ್ಲು ಸಹಿತ ಗುಡುಗು ಮಳೆಯ ಸಾಧ್ಯತೆ ಇದ್ದು, ಮೇ 26 ಮತ್ತು 27ರಂದು ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ.

 

ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮೇ 25ರಂದು ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 26 ಮತ್ತು 27ರಂದು ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

 

ಹವಾಮಾನ ಇಲಾಖೆ ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದೆ. ಸಿಡಿಲು ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ.


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!