ಟ್ರೆಂಡಿಂಗ್ ಸುದ್ದಿಗಳುತಾಲೂಕುಸ್ಥಳೀಯ ಸುದ್ದಿಗಳು

ಚಿಣ್ಣರ ಬಿಂಬ ಸಾಕಿನಾಕ ಶಿಬಿರ ಕನ್ನಡ ತರಗತಿ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವ ಕಾರ್ಯಕ್ರಮ

Share News

ಚಿಣ್ಣರ ಬಿಂಬ ಸಾಕಿನಾಕ ಶಿಬಿರ ಕನ್ನಡ ತರಗತಿ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವ ಕಾರ್ಯಕ್ರಮ

ತಾರೀಕು 14. 06. 2026. ನಮ್ಮ ಸಾಕಿನಾಕ ಚಿಣ್ಣರಬಿಂಬದ 2026- 27ನೇ ಸಾಲಿನ ಕನ್ನಡ ತರಗತಿಯನ್ನು ಆರಂಭಿಸಲಾಯಿತು. ಇಂದಿನ ನಮ್ಮ ಕನ್ನಡ ತರಗತಿಯ ಉದ್ಘಾಟನೆಗೆ ನಮ್ಮ ಸ್ಥಳೀಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿರುವ ಶ್ರೀಮತಿ ಹೇಮಾ ಕೋಟ್ಯಾನ್ ರವರು ಆಗಮಿಸಿದ್ದರು ಜೊತೆಗೆ ಕೇಂದ್ರೀಯ ಸಮಿತಿಯ ಸದಸ್ಯರಾದ ರಮೇಶ್ ರೈ ಅಣ್ಣ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಶೆಟ್ಟಿ ಅಕ್ಕ, ನಮ್ಮ ಚಿಣ್ಣರಬಿಂಬದ ಮಾಜಿ ಶಿಬಿರ ಮುಖ್ಯಸ್ಥ ರಾಜವರ್ಮಾ ಜೈನ್, s m ಶೆಟ್ಟಿ ಚಿಣ್ಣರ ಬಿಂಬ ಶಿಬಿರದ ಕನ್ನಡ ಶಿಕ್ಷಕಿ ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ಉಷಾ ಶೇರುಗಾರ್, ಶಿಬಿರ ಮುಖ್ಯಸ್ಥೆ ಶೋಭಾ ಅಮೀನ್, ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ, ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿ, ಭಜನೆ ಶಿಕ್ಷಕಿ ಶಶಿ ಶೆಟ್ಟಿ, ನಮ್ಮ ಮಕ್ಕಳ ಪಾಲಕರು ಹಾಗೂ ಮುದ್ದು ಚಿಣ್ಣರ ಸಮ್ಮುಖದಲ್ಲಿ ಶ್ರೀಮತಿ ಹೇಮಾ ಕೋಟ್ಯಾನ್ ರವರು ದೇವರಿಗೆ ದೀಪ ಬೆಳಗಿ ಮಕ್ಕಳು ಒಟ್ಟಾಗಿ ಭಜನೆ ಹಾಡುವುದರ ಮೂಲಕ ಆರಂಭಿಸಲಾಯಿತು.

ಶ್ರೀಮತಿ ಹೇಮಾ ಕೋಟ್ಯಾನ್ ರವರು ಮಾತನಾಡುತ್ತ
ಸಂಸ್ಥೆಯ ಕಾರ್ಯವೈಖರಿಯನ್ನು ನಾವು ನೋಡುತ್ತ ಬಂದಿದ್ದೇವೆ. ಈ ಸಂಸ್ಥೆಯು ಇನ್ನಷ್ಟೂ ಚೆನ್ನಾಗಿ ಬೆಳೆಯಲಿ. ನಮ್ಮ ಸಹಕಾರ ಸದಾ ಇದೆ ಎಂದರು.

ಬಳಿಕ ಡಾ. ಪೂರ್ಣಿಮ ಶೆಟ್ಟಿ ಅಕ್ಕನವರು, ಚಿಣ್ಣರು ಮತ್ತು ಪಾಲಕರನ್ನು ಉದ್ದೇಶಿಸಿ ಕೆಲವು ಹಿತನುಡಿಗಳನ್ನು ಆಡಿದರು. ಚಿಣ್ಣರಬಿಂಬ ಒಂದು ಕುಟುಂಬ ಇಲ್ಲಿ ಎಲ್ಲಾರೂ ಒಂದಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂಬ ಹಿತನುಡಿಗಳು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದರು.

ಇಂದು ಹೊಸದಾಗಿ ನಮ್ಮ ಸಮಿತಿಯನ್ನು ರಚಿಸಲಾಯಿತು.
ಎಲ್ಲಾ ಪಾಲಕರನ್ನು ಸಮಿತಿಯಲ್ಲಿ ಸೇರಿಸಿ ಎಲ್ಲರಿಗೂ ಸಂಸ್ಥೆಯ ಬಗೆಗೆ ಅಭಿಮಾನದಿಂದ ತೊಡಗಿಸಿಕೊಳ್ಳುವಂತೆ ತಿಳಿಸಲಾಯಿತು. ಯಾವುದೇ ಮನಸ್ತಾಪಗಳು ಇದ್ದರೂ ಕೂಡ ಅದನ್ನೆಲ್ಲ ಮರೆತು ಒಂದಾಗಿ ಸೇರಿ ಎಲ್ಲರೂ ಒಂದೇ ಕುಟುಂಬವೆಂದು ಸೇರಿ ಕೆಲಸ ಮಾಡಬೇಕು ಎಂಬ ಮಾತನ್ನು ಒತ್ತಿ ಹೇಳಿದರು.

ತರಗತಿಯ ಉದ್ಘಾಟನಾ ಸಮಾರಂಭದ ಜೊತೆ ಜೊತೆಗೆ ಇಂದು ನಮ್ಮ ಸಾಕಿನಾಕ ಚಿಣ್ಣರಬಿಂಬ ಶಿಬಿರದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಗಿಡಗಳನ್ನು ಎಲ್ಲರೂ ಸೇರಿ ನೆಡುವ ಮೂಲಕ ಮಕ್ಕಳಿಗೆ ವನಮಹೊತ್ಸವದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಲಾಯಿತು.
ಡಾ. ಪೂರ್ಣಿಮಾ ಶೆಟ್ಟಿ ಅಕ್ಕನವರು, ಚಿಣ್ಣರ ಬಿಂಬ ಯಾವುದೇ ಭೇದ ಭಾವವಿಲ್ಲದ ನಿಸ್ವಾರ್ಥ ಸಂಸ್ಥೆಯಾಗಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆಕೊಳ್ಳಬೇಕು. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದ ರಕ್ಷಣೆ ಸಾಧ್ಯ ಎಂಬುದಾಗಿ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.

ವಲಯ ಮುಖ್ಯಸ್ಥೆ ಉಷಾ ಷೇರುಗಾರ್ ರವರು ವಂದನಾರ್ಪಣೆ ಮಾಡಿದರು.

ಮಕ್ಕಳಿಗೆ ಸಿಹಿ ತಿಂಡಿ ನೀಡಿ ರಾಷ್ಟ್ರಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಮುಗಿಸಿದೆವು.


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!