ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನೆತ್ತರ ಶಾಲಾ ವಾರ್ಷಿಕೋತ್ಸವ’ ಕಾರ್ಯಕ್ರಮ

Share News

​ಹೃತ್ಪೂರ್ವಕ ಆಮಂತ್ರಣ

​ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನೆತ್ತರ, ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ (ರಿ.), ಭಾಗ್ಯಶ್ರೀ ಮಹಿಳಾ ಮಿತ್ರ ಮಂಡಳಿ ನೆತ್ತರ, ಶಾಲಾಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ ಹಾಗೂ ಗ್ರಾಮದ ವಿದ್ಯಾಭಿಮಾನಿಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಕೊಳವೆ ಬಾವಿ ನಿರ್ಮಾಣ ಮತ್ತು ಶಾಲಾ ಮೈದಾನ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಪ್ರಯುಕ್ತ ‘ಶಾಲಾ ವಾರ್ಷಿಕೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

​ಈ ಸಂಭ್ರಮದ ಕಾರ್ಯಕ್ರಮವು ದಿನಾಂಕ 27-11-2026 ರಂದು ಶುಕ್ರವಾರ ನೆತ್ತರ ಶಾಲಾ ವಠಾರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9:00 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ವಿವಿಧ ಆಕರ್ಷಕ ಸ್ಪರ್ಧೆಗಳು (ರೀಲ್ಸ್ ಕಾಂಪಿಟೇಷನ್, ಫ್ಯಾಷನ್ ಶೋ, ಕೇಶ ವಿನ್ಯಾಸ, ರಂಗೋಲಿ, ಮೇಕಪ್, ಮೆಹಂದಿ, ಬೆಸ್ಟ್ ಜೀನ್ಸ್ ಪ್ಯಾಂಟ್ ಮಾಡೆಲ್, ಎಥ್ನಿಕ್ ಫಿಸಿಕ್) ನಡೆಯಲಿವೆ. ತದನಂತರ ಸಂಜೆ 6:00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

​ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

​(ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು ಸಂಪರ್ಕಿಸಿ:77951 44863


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!