ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ 18/ 10 /26ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಕಿಯಂಗಡಿ ಮಾಳ ಇಲ್ಲಿ ನೆರವೇರಿತು

ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ 18/ 10 /26ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಕಿಯಂಗಡಿ ಮಾಳ ಇಲ್ಲಿ ನೆರವೇರಿತು
ಏಳು ದಿನಗಳ ಕಾಲ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ “ತುಳುನಾಡಿನ ಕರ ಕೌಶಲ್ಯಗಳ ಸ್ಪರ್ಧಾ” ಕಾರ್ಯಕ್ರಮ, ಆಳ್ವಾಸ್ ವಿದ್ಯಾ ಸಂಸ್ಥೆಯ ಸಂತೋಷ್ ಕುಮಾರ್ ಇವರಿಂದ “ಜೇಡಿ ಮಣ್ಣಿನಿಂದ ವಿವಿಧ ರೀತಿಯ ಕಲಾಕೃತಿಗಳ ರಚನೆ”, ಮಾಳ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ ದಿವಾಕರ್ ಇವರಿಂದ “ಹದಿ ಹರೆಯದ ಸಮಸ್ಯೆಗಳ” ಕುರಿತು ಮಾಹಿತಿ,
ಕಾರ್ಕಳದ ನೋಟರಿ ಶ್ರೀ ರಮಣ ಆಚಾರ್ಯ ಇವರಿಂದ” ಕಾನೂನು ಮತ್ತು ಜೀವನ”, ಪ್ರೊ. ನವೀನ್ ಹಾಗೂ ಡಾ. ಸುದರ್ಶನ್ ಇವರಿಂದ “ಜೀವನ ಕೌಶಲ್ಯ ತರಬೇತಿ”, ಸುನಿತಾ ಇವರಿಂದ “ಬ್ಯಾಂಕ್ ವ್ಯವಹಾರಗಳ ಕುರಿತು, ನೋರ್ಬರ್ಟ್ ಮಾರ್ಟಿಸ್ ಹಾಗೂ ಸೀತಾರಾಮ್ ಇವರಿಂದ “ಸಾಮರಸ್ಯ ಮತ್ತು ಸಹಬಾಳ್ವೆ “ಕುರಿತು, ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು
ಸಂಸ್ಥೆಯ ಪೂರ್ವ ಸ್ವಯಂಸೇವಕರು ಮಾಡಿದ ಸಾಧನೆಗಳನ್ನು ಗುರುತಿಸಿ ಅವರನ್ನು ಅಭಿನಂದಿಸಲಾಯಿತು
ಕಬ್ಬಡಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸುಕೇಶ್ ಕುಲಾಲ್, ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ಪುನೀತ್ ಶೆಟ್ಟಿ, ನಾಟಕ ರಂಗದಲ್ಲಿ ಸಾಧನೆ ಮಾಡಿದ ಗುರುಪ್ರಸಾದ್ ಶೆಟ್ಟಿ ಹಾಗೂ ಕೀರ್ತನ್ ಪೂಜಾರಿ
ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಸುಧಾಕರ್ ಶೆಟ್ಟಿ( ಅಡುಗೆ ತಯಾರಕರು ),
ಮುಖ್ಯ ಶಿಕ್ಷಕರಾದ ಭುಜಂಗ, ಚಂದ್ರನಾಥ ಇಂದ್ರ( ಚಪ್ಪರ ), ಸಂದೀಪ್ ಶೆಟ್ಟಿ( ಧ್ವನಿವರ್ಧಕ ), ರೋಹಿತ್( ಸಂಗೀತ), ಸಂಪತ್ ಜೈನ್ ( ಪ್ರಸಾರ ) ಇವರನ್ನು ಸನ್ಮಾನಿಸಲಾಯಿತು
ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು
ಹುಡುಗರ ವಿಭಾಗದಲ್ಲಿ ನಿಸರ್ಗ ತಂಡ ಪ್ರಥಮ ಸ್ಥಾನ,ಚಿಗುರು ಹಾಗೂ ಬೆಳಕುತಂಡಗಳು ದ್ವಿತೀಯ ಸ್ಥಾನ ಪಡೆದವು
ಹುಡುಗಿಯರ ವಿಭಾಗದಲ್ಲಿ ನಿಸರ್ಗ ತಂಡ ಪ್ರಥಮ ಸ್ಥಾನ, ಬೆಳಕು ಮತ್ತು ಸಮಷ್ಟಿ ತಂಡಗಳು ದ್ವಿತೀಯ ಸ್ಥಾನ ಪಡೆದವು
ಸಮಗ್ರ ಪ್ರಶಸ್ತಿಯನ್ನು ನಿಸರ್ಗ ತಂಡ ಪಡೆದುಕೊಂಡಿತು
ರಕ್ಷಿತ್, ಯೋಗಿತ್, ರಾಜೇಶ್, ಸೂರಜ್, ಧನುಷ್ ಬಿ ಭಂಡಾರಿ, ಸಂತೃಪ್ತಿ, ಪೂರ್ವಿ, ಅಮೂಲ್ಯಶ್ರೀ, ಕಾವ್ಯ, ಪೂಜಾ ಇವರನ್ನು ಉತ್ತಮ ಸ್ವಯಂಸೇವಕರು ಹಾಗೂ ಚೇತನ್, ವಿಖ್ಯಾತ, ಸಂಜಯ ಬಿ ಕೋಟಿಯನ್, ಸಿಂಚನ್, ಯಶ್ವಿತ್, ಸುಶಾಂತ್, ವೈಭವ್, ಧನ್ಯ, ತೃಷ, ಸ್ವಾತಿ ಸ್ವಯಂಸೇವಕರನ್ನು ಉತ್ತಮ ಶ್ರಮಜೀವಿಗಳು ಎಂದು ಗುರುತಿಸಿ ಅಭಿನಂದಿಸಲಾಯಿತು
ಸುಜನ್ ಎಸ್ ಪೂಜಾರಿ ಹಾಗೂ ಸಂತೃಪ್ತಿ ಇವರನ್ನು Best outgoing nss volunteers ಎಂದು ಗುರುತಿಸಿ ಅಭಿನಂದಿಸಲಾಯಿತು
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ವಿ.ಪಿ ವೀರೇಂದ್ರ, ಅನಿತಾ ಶಣೈ, ಅನಿಲ್ ಎಸ್ ಪೂಜಾರಿ, ಭುಜಂಗ, ಯಶೋಧರ್ ಶೆಟ್ಟಿ, ಚಂದ್ರನಾಥ ಇಂದ್ರ ಉಪಸ್ಥಿತರಿದ್ದರು
ಉಪನ್ಯಾಸಕರಾದ ಅಂಬರೀಶ್ ಭಾರದ್ವಾಜ್ ಸ್ವಾಗತಿಸಿ ಕಾರ್ಯಕ್ರಮ ಅಧಿಕಾರಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.





