ಸ್ಥಳೀಯ ಸುದ್ದಿಗಳು

ಶ್ರೀ ಮಹಾಗಣಪತಿ ದೇವಸ್ಥಾನ ನೂರಾಳ್ ಬೆಟ್ಟು ನಲ್ಲಿ ಮೇ 29ರಂದು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

Share News

ಕಾರ್ಕಳ ತಾಲೂಕಿನ ಶ್ರೀ ಮಹಾಗಣಪತಿ ದೇವಸ್ಥಾನ ನೂರಾಳ್ ಬೆಟ್ಟು ಇದರ ವತಿಯಿಂದ ದಿನಾಂಕ 29.05.2026 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸರ್ವಧರ್ಮ ಬಂಧುಗಳ ಒಂದನೇ ತರಗತಿಯಿಂದ 10ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಬೇಕಾಗುವ ನೋಟು ಪುಸ್ತಕದ ವಿತರಣೆ ಜರಗಲಿರುವುದು.

ಕಾರ್ಯಕ್ರಮದಲ್ಲಿ ಶ್ರೀ ರಕ್ಷಿತ್ ಅಜಿಲರು ,ಪ್ರಧಾನ ಕಾರ್ಯದರ್ಶಿಗಳು ದೈವ ಕ್ಷೇತ್ರ ಬಡಕ್ಕಾವು ಗುತ್ತು ನಾವೂರು, ಶ್ರೀ ಶ್ರೀಧರ ಎನ್ ಸುವರ್ಣ ಕೋಶಾಧಿಕಾರಿಗಳು ಸುವರ್ಣ ಶಿವ ಕೃಪ, ಅತ್ತೂರು ಪದವು ಕಾರ್ಕಳ, ಶ್ರೀಮತಿ ಶಕುಂತಳಾ ಪದ್ಮರಾಜ್, ಅಧ್ಯಕ್ಷರು, ಸೂರ್ಯ ಶ್ರೀ ನೂರಾಳ್ ಬೆಟ್ಟು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಿಸಲಿದ್ದಾರೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದತ್ತ ಆಸಕ್ತಿ ಹೆಚ್ಚಿಸುವುದು ಮತ್ತು ಪೋಷಕರಿಗೆ ಶೈಕ್ಷಣಿಕ ಸಾಮಗ್ರಿಗಳ ಖರ್ಚಿನಲ್ಲಿ ಸಹಾಯವಾಗುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಗ್ರಾಮದ ಹಿರಿಯರು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ಮತ್ತು ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ..

ಪ್ರಸಕ್ತ ವರ್ಷದ ನೋಟ್ ಪುಸ್ತಕ ವಿತರಣೆಗೆ ಶ್ರೀಮತಿ ಪ್ರಮೀಳಾ ಜೈನ್ ಮತ್ತು ಶ್ರೀ ಎನ್ ವಿಜಯಕುಮಾರ್ ಹಾಗೂ ಮಕ್ಕಳು ಜಯದವಳ, ನೂರಾಳ್ ಬೆಟ್ಟು, ಶ್ರೀಮತಿ ವಿನುತಾ ಮತ್ತು ಶ್ರೀ ಪುರುಷೋತ್ತಮ ಆಚಾರ್ಯ ಮತ್ತು ಮಕ್ಕಳು ಕಲ್ಲೆಚ್ಚಿ  ನೂರಾಳ್ ಬೆಟ್ಟು ಇವರು ಸೇವಾಕರ್ತರಾಗಿ ಸಹಕಾರ ನೀಡಿದ್ದಾರೆ.

ನೋಟ್ ಪುಸ್ತಕಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು 2026ರ ಮೇ 25ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರಕ್ಷಿತ್ ಅಜಿಲರು – 9845590323 ಅಥವಾ ಶಕುಂತಳಾ ಪಿ. ರಾಜ್ – 9731126323 ಅವರನ್ನು ಸಂಪರ್ಕಿಸಬಹುದು.

ಕಾರ್ಯಕ್ರಮದ ನಂತರ ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!