ಜಿಲ್ಲಾ ಸುದ್ದಿ

ಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ – ಉದಯ್ ಶೆಟ್ಟಿ ಮುನಿಯಾಲ್

Share News

ಶಾಸಕ ಸ್ಥಾನದ ಘನತೆ ಮರೆತಿರುವ ಸುನಿಲ್ ಕುಮಾರ್ ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆ ಮೂಲಕ ಶಾಸಕಾಂಗ ವ್ಯವಸ್ಥೆಯ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೇಳಿಕೆ ಎಂದು ನಕಲಿ ಸುದ್ಧಿ ಹಂಚಿಕೊಂಡ ವಿಚಾರದಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು ಶಾಸಕರು ಎನ್ನುವುದನ್ನು ಮರೆತು ಪದೇ ಪದೇ ಸುಳ್ಳು ಸುದ್ದಿ ಹಂಚಿಕೊಂಡು ಸಮಾಜದ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಕಲಿ ಲೆಟರ್ ಹೆಡ್ ಹಂಚಿಕೊಂಡಿದ್ದ ಅವರು ಮತ್ತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಅದೇ ಕೆಲಸ ಮಾಡಿದ್ದಾರೆ ಎಂದರು.

ಶಾಸಕಾಂಗ ವ್ಯವಸ್ಥೆಯ ಭಾಗವಾಗಿದ್ದು ಇಂತಹ ರಾಜಕೀಯ ದುರುದ್ದೇಶದ ಕಾರ್ಯದಲ್ಲಿ ನಿರತರಾಗಿರುವ ಸುನಿಲ್ ಕುಮಾರ್ ಅವರಿಗೆ ಇಂತಹ ಕಾರ್ಯ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ ಕುಮಾರ್ ಜನತೆಯ ಕ್ಷಮೆಯಾಚಿಸಬೇಕು ಎಂದು ಉದಯ್ ಶೆಟ್ಟಿ ಮುನಿಯಾಲು ಹೇಳಿದ್ದಾರೆ.


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!